ಆಧಾರ್ ತಿದ್ದುಪಡಿ - ಶಾಲಾ ದಾಖಲಾತಿ ಪರಿಗಣಿಸುವಂತೆ ಮನವಿ.

ಆಧಾರ್ ತಿದ್ದುಪಡಿ - ಶಾಲಾ ದಾಖಲಾತಿ ಪರಿಗಣಿಸುವಂತೆ ಮನವಿ.

ಮಧುಗಿರಿ : ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಶಾಲಾ ದಾಖಲಾತಿ ಮತ್ತು ಕೈ ಬರವಣಿಗೆ ಜನನ ಪ್ರಮಾಣ ಪತ್ರ ಪರಿಗಣಿಸಬೇಕೆಂದು ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು. 

ಆಧಾರ್ ಕಾರ್ಡ್ ನಲ್ಲಿ ಹೆಸರು ಮತ್ತು ಹುಟ್ಟಿದ ದಿನಾಂಕ ತಪ್ಪು ಇರುವ ವಿದ್ಯಾರ್ಥಿಗಳಿಗೆ ತಿದ್ದುಪಡಿ ಮಾಡಲು ಜನನ ಪ್ರಮಾಣ ಪತ್ರವನ್ನು ಕೇಳುತ್ತಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳ ಮತ್ತು ಪೋಷಕರ ಬಳಿ ಜನನ ಪ್ರಮಾಣ ಪತ್ರ ಇರುವುದಿಲ್ಲ ಹಾಗೂ ಶಾಲಾ ದಾಖಲಾತಿಯನ್ನು ಆಧಾರ್ ಸೇವಾ ಕೇಂದ್ರದವರು ಪರಿಗಣಿಸುತ್ತಿಲ್ಲ ಇದರಿಂದ ತಿದ್ದುಪಡಿ ಮಾಡಿಸಲು ಅನೇಕ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಶಾಲಾ ದಾಖಲಾತಿ ಮತ್ತು ಕೈ ಬರವಣಿಗೆ ಜನನ ಪ್ರಮಾಣ ಪತ್ರ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ವೇಳೆ ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ರಾಘವೇಂದ್ರ ಮಾತನಾಡಿ ಆಧಾರ್ ಕಾರ್ಡ್ ನಲ್ಲಿ ಹೆಸರು ತಪ್ಪಿರುವ ವಿದ್ಯಾರ್ಥಿಗಳು ಆಧಾರ್ ತಿದ್ದುಪಡಿ ಮಾಡಿಸಲು ಸೇವಾ ಕೇಂದ್ರಗಳಿಗೆ ಶಾಲೆ ಬಿಟ್ಟು ದಿನನಿತ್ಯ ತಿರುಗಾಡುತ್ತಿದ್ದಾರೆ. ಆದರೆ ಸೇವಾ ಕೇಂದ್ರದವರು ಶಾಲಾ ದಾಖಲಾತಿ ಮೇಲೆ ಹೆಸರು ಮತ್ತು ಹುಟ್ಟಿದ ದಿನಾಂಕ ತಿದ್ದುಪಡಿ ಮಾಡಲು ಆಗುವುದಿಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು ಹತ್ತಿರ ಮಾತನಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ರೋಹಿತ್, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್, ಕಾರ್ಮಿಕ ಘಟಕ ಅಧ್ಯಕ್ಷ ತಿಮ್ಮರಾಜು, ಕಾರ್ಮಿಕ ಘಟಕ ನಗರ ಅಧ್ಯಕ್ಷ ರಾಜು, ಪದಾಧಿಕಾರಿಗಳಾದ ರವಿಕುಮಾರ್, ಪ್ರಭು, ದರ್ಶನ್, ರಾಜೇಶ್, ಬಾಬು ಹಾಗೂ ಮತ್ತಿತರರು ಹಾಜರಿದ್ದರು.