ಏಪ್ರಿಲ್ 20ರಂದು ಹೊನ್ನೇಶ್ವರ ಸ್ವಾಮಿ ಸಮಿತಿಯಿಂದ ಮಹಾಸಭೆ - ದೀಪಕ್ ಹೊನ್ನಾಪುರ

ಏಪ್ರಿಲ್ 20ರಂದು ಹೊನ್ನೇಶ್ವರ ಸ್ವಾಮಿ ಸಮಿತಿಯಿಂದ ಮಹಾಸಭೆ - ದೀಪಕ್ ಹೊನ್ನಾಪುರ

ಮಧುಗಿರಿ - ಏಪ್ರಿಲ್ 20ರಂದು ಶ್ರೀ ಹೊನ್ನೇಶ್ವರಸ್ವಾಮಿ ಜೀರ್ಣೋದ್ಧಾರ ಸೇವಾ ಸಮಿತಿಯಿಂದ ಮಹಾಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಹ ಕಾರ್ಯದರ್ಶಿ ದೀಪಕ್ ಹೊನ್ನಾಪುರ ತಿಳಿಸಿದ್ದಾರೆ.


ತಾಲೂಕಿನ ದೊಡ್ಡೇರಿ ಹೋಬಳಿಯ ಶಿವನಗೆರೆ ಶ್ರೀ ಹೊನ್ನೇಶ್ವರಸ್ವಾಮಿ ಸನ್ನಿಧಿಯಲ್ಲಿ ದೇವಾಲಯದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲು ಮಹಾ ಸಭೆಯನ್ನು ಕರೆಯಲಾಗಿದ್ದು, ಈಗಾಗಲೇ ಗರ್ಭದಗುಡಿ, ಪ್ರಾಂಗಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಭಕ್ತಾದಿಗಳ ಸಹಕಾರದಿಂದ ನಡೆಯುತ್ತಿದೆ, ಇನ್ನೂ ಆನೇಕ ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿದ್ದು ಹಾಗೂ ಇತರೆ ವಿಷಯಗಳ ಬಗ್ಗೆ ಗ್ರಾಮಸ್ಥರು ಮತ್ತು ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಲು ಮಹಾಸಭೆ ಆಯೋಜಿಸಲಾಗಿದೆ. ಈ ಸಂಬಂಧ ಸಹಾಯ ಮತ್ತು ಸಹಕಾರ ಕೋರಲು ಏ. 20 ರ ಭಾನುವಾರ ಮಹಾಸಭೆಯನ್ನು ಕರೆಯಲಾಗಿದ್ದು, ಈ ಆಮಂತ್ರಣಕ್ಕೆ ತಪ್ಪದೇ ಎಲ್ಲರು ಸಕಾಲಕ್ಕೆ ಆಗಮಿಸಿ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಮತ್ತು ಉದಾರವಾದ ಸಹಾಯ, ಸಹಕಾರ ನೀಡಬೇಕಾಗಿ ಮನವಿ ಮಾಡಿದ್ದಾರೆ.