ಗಣೇಶೋತ್ಸವ ಆಚರಿಸಲು 30 ಲಕ್ಷ ರೂ ವೆಚ್ಚದಲ್ಲಿ ಶಾಶ್ವತ ಶೆಡ್ - ಲಾಲಾಪೇಟೆ ಮಂಜುನಾಥ್

ಗಣೇಶೋತ್ಸವ ಆಚರಿಸಲು 30 ಲಕ್ಷ ರೂ ವೆಚ್ಚದಲ್ಲಿ ಶಾಶ್ವತ ಶೆಡ್ - ಲಾಲಾಪೇಟೆ ಮಂಜುನಾಥ್

ಮಧುಗಿರಿ - ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಮತ್ತು ಶ್ರೀ ಪ್ರಸನ್ನ ಪಾರ್ವತಿ ಸಮೇತ ಮಲ್ಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಗಣೇಶೋತ್ಸವ ಆಚರಿಸಲು 30 ಲಕ್ಷ ರೂ ವೆಚ್ಚದಲ್ಲಿ ಶಾಶ್ವತ ಶೆಡ್ ನಿರ್ಮಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಜಿ.ಎ.ಲಾಲಾಪೇಟೆ ಮಂಜುನಾಥ್ ತಿಳಿಸಿದರು. 

ಶ್ರೀ ವಿದ್ಯಾ ಗಣಪತಿ ಮಹಾಮಂಡಳಿ ವತಿಯಿಂದ 2025ರ ಆಗಸ್ಟ್ 27 ರಿಂದ 9 ದಿನಗಳ ಕಾಲ ನಡೆಯುವ ಗಣೇಶೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು ಈ ಹಿಂದೆ ಪೂರ್ವ ಸಿದ್ಧತಾ ಸಭೆಯಲ್ಲಿ ಹಾಜರಾಗಿದ್ದ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರಿಗೆ ಮಂಡಳಿಯವರು ನೀಡಿದ್ದ ಮನವಿಯನ್ನಾಧರಿಸಿ ಈ ಶಾಶ್ವತ ಶಡ್ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭೂಮಿ ಪೂಜೆ ಮಾಡಲಾಗುವುದು ಎಂದರು. 

ಪ್ರತಿ ಬಾರಿಯಂತೆ ಈ ಬಾರಿಯೂ 9 ದಿನಗಳ ಕಾಲ ಗಣೇಶೋತ್ಸವ ನಡೆಸಲಾಗುವುದು. ಗಣಪತಿ ವಿಸರ್ಜನೆ ವೇಳೆ ಪಟ್ಟಣದಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳ ರಜೆ ಘೋಷಿಸಲು ಬಿಇಓ ರವರಲ್ಲಿ ಮನವಿ ಮಾಡಲಾಗುವುದು ಎಂದರು.

ಇದೆ ಸಂದರ್ಭದಲ್ಲಿ ಪ್ರತಿನಿತ್ಯ ಧಾರ್ಮಿಕ ಚಟುವಟಿಕೆಗಳ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು ಹಾಗೂ ಮಂಡಳಿಯ ಖಜಾಂಚಿ ಜಿ.ಆರ್.ಧನಪಾಲ್ ಜಮಾ-ಖರ್ಚಿನ ವಿವರ ಸಲ್ಲಿಸಿದರು. 

ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿAದರಾಜು, ಸದಸ್ಯ ಮಂಜುನಾಥ್ ಆಚಾರ್, ಮಾಜಿ ಸದಸ್ಯರುಗಳಾದ ಆರ್‌ಎಲ್‌ಎಸ್ ರಮೇಶ್, ಶ್ರೀನಿವಾಸ್ ,ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ್ ಮೂರ್ತಿ, ಶಂಕರ ಸೇವಾ ಸಮಿತಿಯ ಅಧ್ಯಕ್ಷ ಬಿ.ಆರ್‌ಸತ್ಯನಾರಾಯಣ, ಆಡಿಟರ್ ಲಕ್ಷ್ಮಿ ಪ್ರಸಾದ್, ಯುವ ಮುಖಂಡರಾದ ಆನಂದ ಕೃಷ್ಣ, ಕಿಶೋರ್, ಮಾರ್ವಾಡಿ ಸಂಘದ ಮೋಹನ್, ಲಕರಾಂ, ಮಂಡಳಿಯ ಸದಸ್ಯರುಗಳಾದ ದೋಲಿಬಾಬು, ಜಿ.ನಾರಾಯಣರಾಜು, ಮಂಜುನಾಥ್, ಕಿಶೋರ್ ಶೆಟ್ಟಿ, ಬಸವರಾಜು ಹಾಗೂ ಪ್ರಧಾನ ಅರ್ಚಕ ಅನಂತ ಪದ್ಮನಾಭ ಭಟ್ಟರು ಇದ್ದರು.