ದಲಿತ ಪರ ಹೋರಾಟಗಾರ ನಟರಾಜ್ ಮೌರ್ಯ ಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಮಧುಗಿರಿ : ಭೀಮ್ ಆರ್ಮಿ ಸಂಘಟನೆ ತಾಲ್ಲೂಕ್ ಅಧ್ಯಕ್ಷ ನಟರಾಜ್ ಮೌರ್ಯ ಗೆ ಈ ಬಾರಿ ತಾಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕಿನ ಮಿಡಿಗೇಶಿ ಹೋಬಳಿ ನೇರಳೆಕೆರೆ ಗ್ರಾಮದ ನರಸಪ್ಪ ಮತ್ತು ಪುಟ್ಟನರಸಮ್ಮನವರ ಪುತ್ರ ನಟರಾಜ್ ಮೌರ್ಯ ಅವರು ಸುಮಾರು 12 ವರ್ಷಗಳಿಂದ ಹಲವಾರು ಸಂಘ- ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗು ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಹಲವಾರು ಸಾಮಾಜಿಕ ಕಾರ್ಯಗಳು ಹಾಗೂ ಸಮಾಜ ಸೇವೆ ಕಾರ್ಯಕ್ರಮಗಳನ್ನು ಮಾಡಿಕೊಂಡುಬಂದಿದ್ದು, ಇವರು ವಿದ್ಯಾರ್ಥಿ ದೆಸೆಯಿಂದಲೇ ಕನ್ನಡಪರ ಹೋರಾಟ , ಭ್ರಷ್ಟಾಚಾರ ವಿರುದ್ಧ ಹೋರಾಟ, ನೊಂದ ಬಡವರ ಜೊತೆಗೆ ವಿದ್ಯಾರ್ಥಿಗಳ ಪರ ಹೋರಾಟದಲ್ಲಿಯು ಸಹ ಭಾಗವಹಿಸಿ ಹಲವಾರು ಬಾರಿ ಉಚಿತ ಆರೋಗ್ಯ ಶಿಬಿರಗಳು ನಡೆಸಿದ್ದರು. ರಕ್ತದಾನ ಶಿಬಿರಗಳು ಹಾಗೂ ದಲಿತ ಪರ ಹೋರಾಟಗಳಲ್ಲಿಯೂ ಸಹ ಸಕ್ರಿಯರಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಸಹ ತೊಡಗಿಸಿಕೊಂಡಿದ್ದ ಇವರಿಗೆ ಈ ಬಾರಿ ತಾಲೂಕು ಆಡಳಿತ ಸಮಾಜ ಸೇವೆ ವಿಭಾಗದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.