ನೀರು ಕುಡಿಯಲು ಹೋಗಿ ಇಬ್ಬರು ಮಕ್ಕಳ ಸಾವು

ನೀರು ಕುಡಿಯಲು ಹೋಗಿ ಇಬ್ಬರು ಮಕ್ಕಳ ಸಾವು

ಮಧುಗಿರಿ : ತಾಲೂಕಿನ ಮಿಡಿಗೇಶಿ ಗ್ರಾಮದ ಹೊಂಡ ಒಂದರಲ್ಲಿ ನೀರು ಕುಡಿಯಲು  ಹೋಗಿ ಕಾಲುಜಾರಿ ಬಿದ್ದು ಇಬ್ಬರು ಮಕ್ಕಳು ಮೃತ ಪಟ್ಟಿರುವ  ಘಟನೆ ಭಾನುವಾರ ಜರುಗಿದೆ. 

ತಾಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದ  ವಾಸಿ ಮಂಜುನಾಥ ಎಂಬುವವರ ಮಕ್ಕಳಾದ ರವೀಂದ್ರ (9) ಹಾಗೂ ಸುಚಿತ್ರಾ (11) ಮೃತ ದುರ್ದೈವಿಗಳಾಗಿದ್ದು, ಬಾಯಾರಿಕೆಯಿಂದ ನೀರು ಕುಡಿಯಲು ಹೋದಾಗ ಘಟನೆ ಸಂಭವಿಸಿದೆ. 

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದ್ದು, ಮಿಡಿಗೇಶಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುನ್ನಚ್ಚೆರಿಕೆ ವಹಿಸಿ - ಬಿಇಓ ಮನವಿ 

ಪೋಷಕರು ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಕೆರೆ-ಕಟ್ಟೆಗಳು, ಹೊಂಡಗಳ ಬಳಿ ಕಳಿಸದಂತೆ  ಮುನ್ನೆಚ್ಚರಿಕೆ ವಹಿಸುವಂತೆ ಪೋಷಕರ ಸಭೆಯಲ್ಲಿ ಅನೇಕ ಬಾರಿ ತಿಳಿಸಿದ್ದೆವು.  ರಜೆ ಇರುವ ಕಾರಣ  ಮಕ್ಕಳ ಬಗ್ಗೆ ಕಾಳಜಿವಹಿಸಬೇಕು.  ಇಂತಹ ದುರ್ಘಟನೆ ನಡೆದಿರುವುದು ಬೇಸರ ತರಿಸಿದೆ. ಇನ್ನು ಮುಂದಾದರು ಪೋಷಕರು ಮಕ್ಕಳ ಬಗ್ಗೆ ನಿಗಾವಹಿಸಬೇಕು  ಹನುಮಂತರಾಯಪ್ಪ  ಕೆ.ಎನ್ -  ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಧುಗಿರಿ