ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಕಟಿಬದ್ಧ : ಲಾಲಾಪೇಟೆ ಮಂಜುನಾಥ್

ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಕಟಿಬದ್ಧ : ಲಾಲಾಪೇಟೆ ಮಂಜುನಾಥ್

ಮಧುಗಿರಿ : ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಕಟಿಬದ್ಧನಾಗಿರುವುದಾಗಿ ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ತಿಳಿಸಿದರು.

ಪಟ್ಟಣದ ಪುರಸಭೆ ವತಿಯಿಂದ 18 ಮತ್ತು 23 ವಾರ್ಡ್ಗಳಿಗೆ ಅಮೃತ್-2 ಕಾಮಗಾರಿ ಅಡಿಯಲ್ಲಿ ಮನೆ-ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸುವ ಧ್ಯೇಯವನ್ನು ಪುರಾಸಭೆ ಹೊಂದಿದ್ದು, ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಅಮೃತ್-2 ಕಾಮಗಾರಿ ಅಡಿಯಲ್ಲಿ ಮನೆ-ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಇನ್ನೂ ಉಳಿಕೆ ಕೆಲವು ಭಾಗಗಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ತುರ್ತ್ತಾಗಿ ನೀರಿನ ಸೌಕರ್ಯ ಒದಗಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ನಿವಾಸಿ ಬಡಕನಹಳ್ಳಿ ರಾಘವೇಂದ್ರ ಮಾತನಾಡಿ, ಪಟ್ಟಣದ ಗೌರಿಬಿದನೂರು ರಸ್ತೆಯಲ್ಲಿರುವ ವೇ-ಬ್ರಿಡ್ಜ್ ಹಿಂಭಾಗದಲ್ಲಿನ ಮನೆಗಳಿಗೆ ಇಲ್ಲಿಯವರೆಗೂ ನೀರಿನ ಸಂಪರ್ಕ ಇಲ್ಲದಿರುವುದನ್ನು ಸ್ಥಳೀಯ ವಾರ್ಡ್ ಸದಸ್ಯರಾದ ನಾಗಲತಾ ಲೋಕೇಶ್ ಮತ್ತು ಪುರಸಭಾ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ಅವರ ಗಮನಕ್ಕೆ ತರಲಾಗಿತ್ತು, ಇದಕ್ಕೆ ಸ್ಪಂದಿಸಿ ಅಮೃತ್-2 ಕಾಮಗಾರಿ ಅಡಿಯಲ್ಲಿ ಮನೆ-ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದು, ಅಧ್ಯಕ್ಷರು ಹಾಗೂ ಸದಸ್ಯರಿಗೆ ಸ್ಥಳೀಯ ನಿವಾಸಿಗಳಿಂದ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುರುಳೀ, ಬಸವರಾಜಪ್ಪ, ರಾಮಣ್ಣ, ಶಿವಕುಮಾರ್, ಮನು, ಪ್ರತಿಭಾ, ರಾಜಮ್ಮ ,ನಾಗರತ್ನ, ಭವ್ಯ ಶಂಕರ ನಾರಾಯಣ ರಾವ್ ಹಾಗೂ ಮುಂತಾದವರು ಇದ್ದರು.