ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಹನುಮಂತಪುರ ಭೈರಪ್ಪ ಅವಿರೋಧವಾಗಿ ಆಯ್ಕೆ

ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಹನುಮಂತಪುರ ಭೈರಪ್ಪ ಅವಿರೋಧವಾಗಿ ಆಯ್ಕೆ

ಮಧುಗಿರಿ : ಪಿ.ಎಲ್.ಡಿ. ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಹನುಮಂತಪುರ ಬೈರಪ್ಪ ಹಾಗೂ ಉಪಾಧ್ಯಕ್ಷರಾಗಿ ನಾಗಭೂಷಣ್ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಕೆ.ಆರ್.ಬಡವಣೆಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕ್ ನಿಯಮಿತ ಸಂಘಕ್ಕೆ ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾದ್ಯಾಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬೈರಪ್ಪ ಹಾಗೂ ಉಪಾಧ್ಯಕ್ಷರಾಗಿ ನಾಗಭೂಷಣ್ ಅವಿರೋಧವಾಗಿ ಅಯ್ಕೆಯಾಗಿದ್ದರೆಂದು ಚುನಾವಣಾ ಅಧಿಕಾರಿ ವಿ.ಎ. ರಾಘವೇಂದ್ರ ಘೋಷಿಸಿದರು.

ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಬೈರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ ಎನ್ ರಾಜಣ್ಣ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರುಗಳಿಗೆ ಮತ್ತು ಮುಖಂಡರುಗಳಿಗೆ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುತ್ತೇನೆ ಎಂದರು.

ತಾಲೂಕಿನ ರೈತರ ಅನುಕೂಲಕ್ಕೆ ಸ್ವಂತ ಖರ್ಚಿನಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ಈ ಹಿಂದೆ ಭರವಸೆ ನೀಡಿದ್ದು, ಅದಕ್ಕೆ ಬದ್ಧನಿದ್ದೇನೆ ಎಂದು ತಿಳಿಸಿದ ಅವರು, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ ಸಹಕಾರದಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕೆ.ಎಂ.ಎಫ್.ನಿರ್ದೇಶಕ ಮೈದನಹಳ್ಳಿ ಕಾಂತರಾಜು, ತುಮುಲ್ ನಿರ್ದೇಶಕ ಬಿ.ಎನ್.ನಾಗೇಶ್ ಬಾಬು, ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಮೂರ್ತಿ, ಪುರಸಭ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಮುಖಂಡರಾದ ಎಂ. ಎಸ್.ಮಲ್ಲಿಕಾರ್ಜುನಯ್ಯ, ಜೆ.ಡಿ.ವೆಂಕಟೇಶ್, ನಿರ್ದೇಶಕರುಗಳಾದ ಚಿಕ್ಕೊಬಳರೆಡ್ಡಿ, ಎಂ.ಎನ್.ಚೈತ್ರ, ಪಿಳ್ಳ ನರಸಪ್ಪ, ಡಿ.ಕೆಂಚಣ್ಣ, ಚಿಂರಜೀವಿ, ಡಿ.ಎನ್.ನರಸಿಂಹಮೂರ್ತಿ, ಜಿ.ಡಿ.ಚಿಕ್ಕರಂಗಪ್ಪ, ಶಿವರಾಮಯ್ಯ, ವೀರಣ್ಣ, ಚೈತ್ರ, ಚಿನ್ನಮ್ಮ, ಸಿದ್ದಗಂಗಪ್ಪ ಹಾಗೂ ಮುಂತಾದವರು ಇದ್ದರು.