ಮಧುಗಿರಿ ತಾಲೂಕು ದಂಡಾಧಿಕಾರಿಗಳ ಕಚೇರಿಯ ಅಟಲ್ ಜಿ ಜನಸ್ನೇಹಿ ಕೇಂದ್ರ ಪಡಸಾಲೆ ಯಲ್ಲಿ ದಲ್ಲಾಳಿಗಳ ಕಾಟ.
ಮಧುಗಿರಿ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿರುವ ಅಟಲ್ ಜಿ ಜನಸ್ನೇಹಿ ಕೇಂದ್ರ ಪಡಸಾಲೆಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದ್ದು, ಪಹಣಿ ತೆಗೆದುಕೊಳ್ಳಲು ಹಾಗೂ ಚೆಕ್ ಲೀಸ್ಟ್ ಗಳನ್ನು ಹಾಕಿಸಲು ಸಾರ್ವಜನಿಕರು ಹೊರಗಡೆ ಕ್ಯೂನಲ್ಲಿ ನಿಂತಿರುತ್ತಾರೆ. ಆದರೆ ಕಂಪ್ಯೂಟರ್ ಆಪರೇಟರ್ ಹಸೀನಾ ಅವರು ದಲ್ಲಾಳಿಗಳನ್ನು ಕ್ಯಾಬಿನ್ ಒಳಗೆ ಬಿಟ್ಟುಕೊಂಡು ದಲ್ಲಾಳಿಗಳು ತಂದಿರುವಂತ ಅರ್ಜಿಗಳನ್ನು ಮೊದಲು ಹಾಕಿ ಆಮೇಲೆ ಕ್ಯೂನಲ್ಲಿರುವ ಸಾರ್ವಜನಿಕ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮಧ್ಯವರ್ತಿಗಳ ಈ ಕಾಟಕ್ಕೆ ಸಾರ್ವಜನಿಕರು ತುಂಬಾ ಬೇಸರ ವ್ಯಕ್ತಪಡಿಸಿದ್ದು, ತಾಲೂಕು ದಂಡಾಧಿಕಾರಿಗಳು ಇದಕ್ಕೆ ಬ್ರೇಕ್ ಹಾಕುವರ ಎಂದು ಕಾದುನೋಡಬೇಕಾಗಿದೆ.