ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ - ಆರ್.ರಾಜೇಂದ್ರ

ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ - ಆರ್.ರಾಜೇಂದ್ರ

ಮಧುಗಿರಿ : ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಇದನ್ನು ಅಲ್ಪಸಂಖ್ಯಾತ ಸಮುದಾಯದವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.

ಪಟ್ಟಣದ ಪಾವಗಡ ವೃತ್ತದ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸುಮಾರು 3 ಕೋಟಿ 40 ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆಂದು ವಿಧ್ಯಾರ್ಥಿ ನಿಲಯ ಹಾಗೂ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಸಾಕಷ್ಟು ಅನುಧಾನಗಳನ್ನು ನೀಡುತ್ತಿದೆ. ಇದನ್ನು ಸಮುದಾಯದವರು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಗುಣಮಟ್ಟದ ವಿಧ್ಯಾಭ್ಯಾಸ ನೀಡಿಸಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನು ಮಾಡಲು ಶ್ರಮವಹಿಸಬೇಕೆಂದ ಅವರು, ಗುತ್ತಿಗೇದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ಸೂಚಿಸಿದರು. 

ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಸದಸ್ಯರಾದ ಎಂ.ವಿ.ಗೋವಿAದರಾಜು, ಅಲೀಂ ಉಲ್ಲಾ, ಎಂ.ಶ್ರೀಧರ್, ಮುಖ್ಯಾಧಿಕಾರಿ ಸುರೇಶ್, ತಾ.ಪಂ.ಅಭಿವೃದ್ಧಿ ಅಧಿಕಾರಿ ಮಧುಸೂದನ್, ಮುಖಂಡರಾದ ಎಂ.ಕೆ.ನAಜುAಡಯ್ಯ, ಉಮೇಶ್, ಎನ್.ಕಿಶೋರ್, ಎಸ್‌ಬಿಟಿ ರಾಮು, ಸಾಧಿಕ್ ಹಾಗೂ ಮುಂತಾದವರು ಇದ್ದರು.