ಲಿಂಗಾಯತ ಇತಿಹಾಸ, ಸಿದ್ಧಾಂತ, ಸಂಘಟನೆ ಅಧ್ಯಯನ ಶಿಬಿರ

ಲಿಂಗಾಯತ ಇತಿಹಾಸ, ಸಿದ್ಧಾಂತ, ಸಂಘಟನೆ ಅಧ್ಯಯನ ಶಿಬಿರ

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ತುಮಕೂರು ಇವರ ಆಶ್ರಯದಲ್ಲಿ ಲಿಂಗಾಯತ ಇತಿಹಾಸ, ಸಿದ್ಧಾಂತ, ಸಂಘಟನೆ ಅಧ್ಯಯನ ಶಿಬಿರವನ್ನು ಗುಬ್ಬಿ ತಾಲ್ಲೂಕು, ಶ್ರೀ ಸಿದ್ಧರಾಮೇಶ್ವರ ಸಮುದಾಯ ಭವನ, ಹೇರೂರು ಇಲ್ಲಿ ದಿನಾಂಕ ಆಗಸ್ಟ್ 8, 9, 2026 ಇಲ್ಲಿ ಆಯೋಜಿಸಲಾಗಿತ್ತು. ದಿವ್ಯಸಾನಿಧ್ಯವನ್ನು ಶ್ರೀ ಮ. ನಿ. ಪ್ರ. ಸ್ವ. ಚಂದ್ರಶೇಖರ ಮಹಾಸ್ವಾಮಿಗಳು ವಹಿಸಿದ್ದರು. ಉದ್ಘಾಟನೆಯನ್ನು ವಿಶ್ರಾಂತ ನ್ಯಾಯಾಧೀಶರಾದ ಎನ್. ಕೆಂಪಗೌಡರು ನೆರವೇರಿಸಿದರು. ಅಧ್ಯಕ್ಷತೆಯನ್ನು ಜಿ.ಬಿ. ನಾಗಭೂಷಣ ಜಾ.ಲಿಂ.ಮ.ಸ. ಜಿಲ್ಲಾಧ್ಯಕ್ಷರು, ತುಮಕೂರು ಮುಖ್ಯಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಕೋರಣೇಶ್ವರ ಸ್ವಾಮೀಜಿಗಳು ಶ್ರೀ ತೋಂಟದಾರ್ಯಮಠ ಆಳಂದ ಹಾಗೂ ಡಾ|| ಜಿ.ಎಸ್. ಪಾಟೀಲರು ಇತಿಹಾಸಕಾರರು ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು (ಗುಬ್ಬಿ) ಘಟಕವನ್ನು ರಚಿಸಿ ಸೇವಾ ಪದವಿ ಸ್ವೀಕಾರವನ್ನು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಿ.ಎನ್. ಸಂಗಪ್ಪ, ಉಪಾಧ್ಯಕ್ಷರಾಗಿ ನಂಜುAಡಪ್ಪ ಹಾಗು ವಿಶ್ವಣ್ಣನವರು, ಪ್ರದಾನ ಕಾರ್ಯದರ್ಶಿಯಾಗಿ ಜಗದೀಶ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ರೇಣುಕಾರಾಧ್ಯರು ಇನ್ನಿತರ ಒಟ್ಟು 16 ಸದಸ್ಯರನ್ನು ಒಳಗೊಂಡ ಸಂಘ ರಚನೆಯಾಯಿತು. ಸಾನಿಧ್ಯ ವಹಿಸಿದ್ದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡುತ್ತಾ ಇಡೀ ಬ್ರಹ್ಮಾಂಡ ಸ್ವರೂಪವಾದ ಇಷ್ಟಲಿಂಗವನ್ನು ಧರಿಸಿಕೊಂಡು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ಬಸವಾದಿ ಶರಣರ ಆಶಯವಾಗಿತ್ತು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿ.ಎಸ್. ಪಾಟೇಲರು ಲಿಂಗಾಯತ ಧರ್ಮದ ಇತಿಹಾಸ ಹಾಗೂ ಸಿದ್ಧಾಂತವನ್ನು ಕುರಿತು ಮಾತನಾಡುತ್ತಾ ಬಸವಪೂರ್ವ, ಬಸವಯುಗ ಹಾಗೂ ಬಸವೋತ್ತರ ಯುಗಗಳಲ್ಲಿ ಅನೇಕ ಧರ್ಮಗಳ ಉಗಮ, ಅದರ ನೈತಿಕತೆಗಳ ಬಗ್ಗೆ ವಿಚಾರವನ್ನು ಮಂಡಿಸಿದರು. ಲಿಂಗಾಯತ ಧರ್ಮ ಉಳಿಯಬೇಕಾದರೆ ಎಲ್ಲರೂ ಆಚಾರವಂತರಾಗಬೇಕು ಎಂದು ತಿಳಿಸಿದರು. ನಂತರ ಕೋರಣೇಶ್ವರ ಸ್ವಾಮಿಗಳು ಲಿಂಗಾಯತ ಧರ್ಮದ ಸಂಘಟನೆ ಕುರಿತು ಮಾತನಾಡುತ್ತಾ ಬಸವಾದಿ ಶರಣರಿಂದ ಸ್ಥಾಪಿತವಾದ ಲಿಂಗಾಯತ ಧರ್ಮವನ್ನು ಮನೆ-ಮನಗಳಲ್ಲಿ ತಲುಪಿಸಬೇಕು ಎಂದು ವಿಚಾರ ಮಂಡಿಸಿದರು. 

ಇಡೀ ಶಿಬಿರದ ವ್ಯವಸ್ಥೆಯನ್ನು ಸಚ್ಚಿದಾನಂದ ಸದಾನಂದ ರಾಂಪುರ ಹಾಗು ಅವರ ಕುಟುಂಬದವರು ಜವಾಬ್ದಾರಿಯನ್ನು ವಹಿಸಿಕೊಂಡು ನೆರವೇರಿಸಿಕೊಟ್ಟರು. ಧರ್ಮಬಾಂಧವರು, ತುಮಕೂರು ಹಾಗೂ ಬೆಂಗಳೂರಿನಿAದ ಅನೇಕ ಶಿಬಿರಾರ್ಥಿಗಳು ಆಗಮಿಸಿದ್ದರು.