ಎರಡು ವರ್ಷದ ಜಾನ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಎರಡು ವರ್ಷದ ಜಾನ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಮಧುಗಿರಿ : ಮಧುಗಿರಿಯ ಪುಟ್ಟ ಬಾಲಕಿ ಜಾನ್ಸಿ ತನ್ನ ಅದ್ಭುತ ಪ್ರತಿಭೆಯಿಂದ India Book of Records (IBR) Achiever ಗೌರವಕ್ಕೆ ಪಾತ್ರಳಾಗಿದ್ದಾಳೆ.

2024ರ ಮೇ 13ರಂದು ಜನಿಸಿದ ಜಾನ್ಸಿ, ಕೇವಲ 2 ವರ್ಷ 2 ತಿಂಗಳ ವಯಸ್ಸಿನಲ್ಲೇ 11 ತರಕಾರಿಗಳು, 19 ಹಣ್ಣುಗಳು, 8 ಬಣ್ಣಗಳು, ದೇಹದ 20 ಭಾಗಗಳು, 20 ಪ್ರಾಣಿಗಳು, 18 ವಾಹನಗಳು ಹಾಗೂ 7 ಬಾತ್‌ರೂಮ್ ಪರಿಕರಗಳನ್ನು ಗುರುತಿಸುವ ಸಾಮರ್ಥ್ಯ ಪ್ರದರ್ಶಿಸಿದ್ದಾಳೆ.

ಇದರ ಜೊತೆಗೆ 8 ಕನ್ನಡ ಗಾದೆ/ಪದ್ಯಗಳನ್ನು ಹೇಳುವುದು, ವಾರದ ದಿನಗಳನ್ನು ಹೇಳುವುದು, ಕನ್ನಡ ಮತ್ತು ಇಂಗ್ಲಿಷ್ ನರ್ಸರಿ ರೈಮ್ಸ್‌ಗಳನ್ನು ಹೇಳುವುದು, 1ರಿಂದ 10ರವರೆಗೆ ಸಂಖ್ಯೆಗಳು ಹಾಗೂ ಇಂಗ್ಲಿಷ್ ವರ್ಣಮಾಲೆಯ 26 ಅಕ್ಷರಗಳನ್ನು ಸಂಬಂಧಿತ ಪದಗಳೊಂದಿಗೆ ಹೇಳುವ ಮೂಲಕ ಗಮನ ಸೆಳೆದಿದ್ದಾಳೆ.

ಜಾನ್ಸಿ ರಾಷ್ಟ್ರಗೀತೆಯನ್ನು ಹಾಡುವುದು, 11 ವಿವಿಧ ಚಟುವಟಿಕೆಗಳನ್ನು ಮಾಡುವುದು, 8 ಪ್ರಾಣಿಗಳ ಶಬ್ದಗಳನ್ನು ಅನುಕರಿಸುವುದು ಹಾಗೂ 6 ವಸ್ತುಗಳನ್ನು ಸರಿಯಾಗಿ ಹೊಂದಿಸುವ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದಾಳೆ.

ಈ ಸಾಧನೆಯನ್ನು 2026ರ ಆಗಸ್ಟ್ 5ರಂದು ದೃಢೀಕರಿಸಲಾಗಿದ್ದು, ಆಗಸ್ಟ್ 13ರಂದು India Book of Records ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.

ಮಧುಗಿರಿ ಪಟ್ಟಣದ ನಿವಾಸಿಗಳಾದ ಭಾಸ್ಕರ್ ಹಾಗೂ ಮಂಜುಳಾ ದಂಪತಿಯ ಪುತ್ರಿ ಜಾನ್ಸಿಯ ಅಪರೂಪದ ಪ್ರತಿಭೆ ಹಾಗೂ ಸಾಧನೆಗೆ ಕುಟುಂಬಸ್ಥರು, ಬಂಧುಗಳು ಮತ್ತು ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಇಂತಹ ಗಮನಾರ್ಹ ಸಾಧನೆ ಮಾಡಿರುವ ಜಾನ್ಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಮೂಲಕ ಮಧುಗಿರಿಗೆ ಹೆಮ್ಮೆ ತರುವಂತಾಗಲಿ ಎಂಬುದು ಎಲ್ಲರ ಆಶಯ.