ಏಪ್ರಿಲ್ 20 ರಂದು ನಿಟ್ಟರಹಳ್ಳಿ ಗ್ರಾಮದಲ್ಲಿ ಶಿವದೀಕ್ಷೆ ಕಾರ್ಯಕ್ರಮ

ಏಪ್ರಿಲ್ 20 ರಂದು ನಿಟ್ಟರಹಳ್ಳಿ ಗ್ರಾಮದಲ್ಲಿ ಶಿವದೀಕ್ಷೆ ಕಾರ್ಯಕ್ರಮ

ಮಧುಗಿರಿ - ತಾಲೂಕಿನ ನಿಟ್ಟರಹಳ್ಳಿ ಗ್ರಾಮದಲ್ಲಿ ಏ. 19 ಹಾಗೂ ಏ. 20 ರಂದು ಬಿಲ್ವ ವೃಕ್ಷ ದೀಕ್ಷೆ ಮತ್ತು ವಟುಗಳ ಶಿವದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರದ ನಿವೃತ್ತ ಶಿಕ್ಷಕ ಶಂಕರಯ್ಯ ತಿಳಿಸಿದರು. 

ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಏ.19 ರ ಶನಿವಾರದಂದು ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜೆ, ಶ್ರೀ ಗಣಪತಿ ಪೂಜೆ, ಸ್ವಸ್ತಿ ಪುಣ್ಯಹವಾಚನ, ಪಂಚಬ್ರಹ್ಮ ಕಳಸ ಸ್ಥಾಪನೆ ಹಾಗೂ ಏ.20 ರ ಭಾನುವಾರದಂದು ಬೆಳಗ್ಗೆ ಶಿವಲಿಂಗ ಸಂಸ್ಕಾರ ಪೂಜೆ, ಏಕಾದಶ ರುದ್ರಾಭಿಷೇಕ ಪೂಜೆ, ಇಷ್ಟಲಿಂಗ ಮಹಾಪೂಜೆ ಮತ್ತು ಶ್ರೀ ಬಿಲ್ವರುಕ್ಷ ದೀಕ್ಷೆ ಮತ್ತು ವಟುಗಳ ಶಿವ ದಿಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9731715092  /  9141771429 / 9019074677 ಅನ್ನು ಸಂಪರ್ಕಿಸಬಹುದಾಗಿದೆ.