Live Sunday, October 25, 2026
Font Size:
ಸುದ್ದಿ 1 min read 28 Views
Okt 06, 2026

ದೀಪಾವಳಿಗೆ ಜನತೆಗೆ ಸರ್ಕಾರದ ‘ಬೋನಸ್’ ಏನು? ಹಾಲು, ಬಸ್ ದರ ಏರಿಕೆಯೇ ಜನರಿಗೆ ಹಬ್ಬದ ಉಡುಗೊರೆಯೇ?

ದೀಪಾವಳಿಗೆ ಜನತೆಗೆ ಸರ್ಕಾರದ ‘ಬೋನಸ್’ ಏನು? ಹಾಲು, ಬಸ್ ದರ ಏರಿಕೆಯೇ ಜನರಿಗೆ ಹಬ್ಬದ ಉಡುಗೊರೆಯೇ?
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration


ಅ.27ರ ಬಳಿಕ ದರ ಏರಿಕೆ ಸಾಧ್ಯತೆ

ಬೆಂಗಳೂರು, ಅ.6: ಬೆಲೆ ಏರಿಕೆಯ ನಡುವೆ ರಾಜ್ಯದ ಜನರಿಗೆ ಮತ್ತೊಂದು ಹೊರೆ ಬೀಳುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ ಎಂದು ತಿಳಿದುಬಂದಿದೆ. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಅ.27ರ ಬಳಿಕ ದರ ಏರಿಕೆ ಜಾರಿಗೆ ಬರುವ ಸಾಧ್ಯತೆ ಇದೆ.

ಇದೇ ವೇಳೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಏರಿಕೆಗೆ ಒತ್ತಾಯಿಸಿದ್ದು, ಈ ವಿಚಾರವೂ ಸಂಪುಟದಲ್ಲಿ ಚರ್ಚೆಯಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ವಿವೇಚನೆಗೆ ಬಿಡಲಾಗಿದೆ.

ಹೀಗಾಗಿ ದಸರಾ–ದೀಪಾವಳಿ ಅವಧಿಯಲ್ಲಿ ಹಾಲು ಮತ್ತು ಬಸ್ ಪ್ರಯಾಣ ಎರಡೂ ದುಬಾರಿಯಾಗುವ ಸಾಧ್ಯತೆ ಜನರಲ್ಲಿ ಆತಂಕ ಮೂಡಿಸಿದೆ.