Live Sunday, October 25, 2026
Font Size:
ಸುದ್ದಿ 1 min read 28 Views
Sep 25, 2026

ಬುಡುಬುಡಿಕೆ ವೇಷದಲ್ಲಿ ಬಂಗಾರ ವಂಚನೆ: ಇಬ್ಬರ ಬಂಧನ

ಬುಡುಬುಡಿಕೆ ವೇಷದಲ್ಲಿ ಬಂಗಾರ ವಂಚನೆ: ಇಬ್ಬರ ಬಂಧನ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಮಧುಗಿರಿ: ಬುಡುಬುಡಿಕೆ ವೇಷ ಧರಿಸಿ ಪೂಜೆ ಹೆಸರಿನಲ್ಲಿ ಬಂಗಾರ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಮಂಜಯ್ಯ ಹಾಗೂ ಕೃಷ್ಣ ಎಂಬ ಆರೋಪಿಗಳನ್ನು ಬಂಧಿಸಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು 40 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಮುಖ್ಯ ಪೇದೆ ವೆಂಕಟೇಶ್ ಹಾಗೂ ಪೇದೆಗಳಾದ ಮೋಹನ್, ರಂಗರಾಜು, ಪ್ರತಾಪ್ ಕುಮಾರ್, ವಿಜಯ್ ಮತ್ತು ರಜಿತ್ ಭಾಗವಹಿಸಿದ್ದರು.

ಬುಡುಬುಡಿಕೆ ವೇಷದಲ್ಲಿ ಬಂದು ಕಷ್ಟ ಪರಿಹರಿಸುವುದಾಗಿ ನಂಬಿಸಿ ಬಂಗಾರ ಪೂಜೆ ಹೆಸರಿನಲ್ಲಿ ವಂಚಿಸುವವರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಬ್‌ಇನ್ಸ್‌ಪೆಕ್ಟರ್ ಎಂ.ಎಸ್. ಚಂದ್ರಶೇಖರ್ ಮನವಿ ಮಾಡಿದ್ದಾರೆ.