ಸರ್ಕಾರಿ ಶಾಲಾ ಕೊಠಡಿಗಳಿಗೆ ಇಂಡಿಗೋ ಪೈಂಟ್ಸ್ ವತಿಯಿಂದ ಉಚಿತ ಬಣ್ಣ ಭಾಗ್ಯ

ಸರ್ಕಾರಿ ಶಾಲಾ ಕೊಠಡಿಗಳಿಗೆ ಇಂಡಿಗೋ ಪೈಂಟ್ಸ್ ವತಿಯಿಂದ ಉಚಿತ ಬಣ್ಣ ಭಾಗ್ಯ

ಮಧುಗಿರಿ : ತಾಲೂಕಿನ ಮಾಡಗಾನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಹೆಸರಾಂತ ಇಂಡಿಗೋ ಪೇಂಟ್ಸ್ ಲಿಮಿಟೆಡ್ ಹಾಗೂ ಸುರಭಿ ಪೈಂಟ್ಸ್ ವತಿಯಿಂದ ಇಂಡಿಗೋ ಸೇವಾ ಉತ್ಸವ ಎಂಬ ಕಾರ್ಯಕ್ರಮದಡಿ ಸರ್ಕಾರಿ ಶಾಲೆಯ ಕೊಠಡಿಗಳಿಗೆ ಸುಮಾರು 40 ಸಾವಿರದ ವೆಚ್ಚದಲ್ಲಿ ಉಚಿತವಾಗಿ ಬಣ್ಣ ಹಚ್ಚಿಸಿಕೊಡುವ ಮೂಲಕ ಅರ್ಥಗರ್ಭಿತ ಕಾರ್ಯಕ್ರಮ ಆಚರಿಸಲಾಯಿತು.

ಸರ್ಕಾರಿ ಶಾಲಾ ಕೊಠಡಿಗಳಿಗೆ ಪೇಂಟ್ಸ್ ಮಾಡಿಸುವ ಕಾರ್ಯಕ್ರಮಕ್ಕೆ ಸುರಭಿ ಪೇಂಟ್ಸ್ ಮಾಲೀಕ ಸತೀಶ್, ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀರಂಗಪ್ಪ, ಮುಖ್ಯೋಪಾಧ್ಯಾಯಣಿ ರಾಧಾ ಸಹ ಶಿಕ್ಷಕಿ ಮಂಜುಳಾ ಚಾಲನೆ ನೀಡಿದರೆ ವೇದಿಕೆ ಕಾರ್ಯಕ್ರಮವನ್ನು ಇಂಡಿಗೋ ಪೇಂಟ್ಸ್ ಲಿಮಿಟೆಡ್ ಬ್ರಾಂಚ್ ಮ್ಯಾನೇಜರ್ ಸಜ್ಜೀವ್ ಏನ್ ನಾಯರ್ ಹಾಗೂ ಚಿನಕವಜ್ರ ಕ್ಲಸ್ಟರ್ CRP ಶಿವಕುಮಾರ್ ಉದ್ಘಾಟಿಸಿದರು.

ಇದೆ ಸಂದರ್ಭದಲ್ಲಿ ಶಾಲೆಯ ಮಕ್ಕಳಲ್ಲಿ ಉತ್ಸಾಹ ತುಂಬಲು ಕ್ರೀಡೆಗಳನ್ನು ಆಡಿಸಿ ಬಹುಮಾನವನ್ನೂ ಸಹ ವಿತರಿಸುವುದರ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗಂಗಾಧರಯ್ಯ, ದೇವರಾಜ್, ಬಸವರಾಜು, ಇಂಡಿಗೋ ಕಂಪನಿಯ ಅಶ್ವಥ್, ಸೈಯದ್,ಶಾಲೆಯ ಮಕ್ಕಳು, ಪೋಷಕರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.