ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರ ಅತಿಥಿ ಆದ ಡ್ರೋನ್ ಪ್ರತಾಪ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿ ಪೊಲೀಸರ ಅತಿಥಿ ಆದ ಡ್ರೋನ್ ಪ್ರತಾಪ್

ಮಧುಗಿರಿ - ರೈತರ ಕೃಷಿ ಹೊಂಡದಲ್ಲಿ ಸೋಡಿಯಂ ಬಾಂಬ್ ಬ್ಲಾಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ವಿರುದ್ಧ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದ್ದು, ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಮಧುಗಿರಿ ತಾಲೂಕು ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಜನಕಲೋಟಿ ಗ್ರಾಮದ ರೈತರೊಬ್ಬರ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ವೈಜ್ಞಾನಿಕ ಪ್ರಯೋಗ ಮಾಡುತ್ತೇನೆ ಎಂದು ಸೋಡಿಯಂ ಮೆಟಲ್ ಎಂಬ ರಾಸಾಯನಿಕ ವಸ್ತುವನ್ನು  ಬ್ಲಾಸ್ಟ್ ಮಾಡುವುದಾಗಿ ತಿಳಿಸಿ ಕೃಷಿ ಹೊಂಡದಲ್ಲಿ ಹಾಕಿ ಬ್ಲಾಸ್ಟ್ ಮಾಡುವುದಲ್ಲದೆ ಅದನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.  

ಸದ್ಯ ಬಿಎನ್ಎಸ್ ಕಾಯ್ದೆ ಸೆಕ್ಷನ್ 288 ಮತ್ತು ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆ ಸೆಕ್ಷನ್ 3 ರ ಅಡಿ ಎಫ್ಐಆರ್ ದಾಖಲಿಸಿರುವ ಮಿಡಿಗೇಶಿ ಪೊಲೀಸರು ಬೆಂಗಳೂರಿನಲ್ಲಿ ಡ್ರೋನ್ ಪ್ರತಾಪರನ್ನು ಬಂದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.