Live Tuesday, October 27, 2026
Font Size:
ಸುದ್ದಿ 1 min read 3 Views
Sep 17, 2026

33 ಡಿಗ್ರಿ ತಾಪಮಾನಕ್ಕೆ ಜನತೆ ತತ್ತರ; ಮಳೆ ಕೊರತೆಯಿಂದ ರೈತರಿಗೆ ಆತಂಕ

33 ಡಿಗ್ರಿ ತಾಪಮಾನಕ್ಕೆ ಜನತೆ ತತ್ತರ; ಮಳೆ ಕೊರತೆಯಿಂದ ರೈತರಿಗೆ ಆತಂಕ
Share: WhatsApp Facebook
ಸುದ್ದಿ ಆಲಿಸಿ (Audio News Reader)
Listen to full article narration

ಸೆಪ್ಟೆಂಬರ್‌ನಲ್ಲೇ ಮಧುಗಿರಿಯಲ್ಲಿ ಬಿಸಿಲಿನ ಆರ್ಭಟ!

ಮಧುಗಿರಿ: ವಾತಾವರಣ ತಂಪಾಗಿರಬೇಕಾದ ಸೆಪ್ಟೆಂಬರ್ ತಿಂಗಳಲ್ಲೇ ಮಧುಗಿರಿಯಲ್ಲಿ ಬಿಸಿಲಿನ ಬೇಗೆ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ದಾಖಲಾಗುತ್ತಿದ್ದು, ರಣಬಿಸಿಲಿಗೆ ಜನತೆ ತತ್ತರಿಸುವಂತಾಗಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಮಳೆ ಹಾಗೂ ಮೋಡಗಳಿಂದ ವಾತಾವರಣ ತುಸು ತಂಪಾಗಿರಬೇಕಾದರೂ, ಈ ಬಾರಿ ಮಳೆಯ ಕೊರತೆ ಹಾಗೂ ಮೋಡಗಳ ಅಭಾವದಿಂದ ತಾಪಮಾನದಲ್ಲಿ ಏರಿಕೆಯಾಗಿದೆ. ಋತುಮಾನಕ್ಕೆ ಅನುಗುಣವಾಗಿ ಬೀಸಬೇಕಿದ್ದ ನೈಋತ್ಯ ಮಾರುತಗಳ ಬದಲಿಗೆ ಮೇಲ್ಮೈ ಮಟ್ಟದಲ್ಲಿ ವಾಯವ್ಯ ಮಾರುತಗಳು ಬೀಸುತ್ತಿರುವುದು ಹಾಗೂ ದುರ್ಬಲ ಮುಂಗಾರು ಮಳೆಯೂ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೂ ಆತಂಕ ಮೂಡಿದ್ದು, ಮಳೆಗಾಗಿ ರೈತರು ಎದುರು ನೋಡುವಂತಾಗಿದೆ. ಮತ್ತೊಂದೆಡೆ, ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಹೊರಗೆ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹಾಗೂ ಕಾರು ಮಾಲೀಕರು ವಾಹನಗಳನ್ನು ನಿಲ್ಲಿಸಲು ಮರಗಳ ನೆರಳು ಹುಡುಕುತ್ತಿರುವ ದೃಶ್ಯಗಳು ಪಟ್ಟಣದಲ್ಲಿ ಸಾಮಾನ್ಯವಾಗಿವೆ.

ಮಳೆಗಾಲದಲ್ಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿರುವುದು ಜನರ ಗಮನ ಸೆಳೆದಿದ್ದು, ಉತ್ತಮ ಮಳೆಯಾಗಿ ವಾತಾವರಣ ತಂಪಾಗಲಿ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಮತ್ತು ರೈತರು ಕಾಯುತ್ತಿದ್ದಾರೆ.