4 ನಿಮಿಷದಲ್ಲಿ 135 ಬ್ರಾಂಡ್ ಲೋಗೋ ಗುರುತು - ದಾಖಲೆ ಬರೆದ 6 ರ ಪೋರ.
ಮಧುಗಿರಿ - 6 ವರ್ಷದ ಬಾಲಕ ಕೇವಲ 4 ನಿಮಿಷದಲ್ಲಿ ಬರೋಬ್ಬರಿ 135 ಬ್ರಾಂಡ್ ಗಳ ಲೋಗೋವನ್ನು ಗುರುತಿಸುವ ಮೂಲಕ "ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್" ಗೆ ಸೇರಿ ದಾಖಲೆ ಬರೆದಿದ್ದಾನೆ.
ಮಧುಗಿರಿ ಪಟ್ಟಣದ ಬಿ.ಎನ್. ಎಂಟರ್ಪ್ರೈಸಸ್ ಮಾಲೀಕರಾದ ನಿತಿನ್ ಅವರ ಪುತ್ರ ಶ್ರೀವಿಕ್ ಎಚ್.ನಿತಿನ್ ಎನ್ನುವ ಮಗು 6.3 ವರ್ಷಗಳ ವಯಸ್ಸಿನಲ್ಲಿ 4 ನಿಮಿಷಗಳ ಸಮಯದಲ್ಲಿ 135 ಬ್ರಾಂಡ್ ಲೋಗೋಗಳನ್ನು (54 ಕಾರ್ ಬ್ರಾಂಡ್ ಲೋಗೊಗಳನ್ನು ಒಳಗೊಂಡಂತೆ) ಗುರುತಿಸುವ ಮೂಲಕ ಬುದ್ಧಿವಂತಿಕೆ ವಿಭಾಗದಲ್ಲಿ "ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್" ಗೆ ಸೇರಿ ರಾಷ್ಟ್ರೀಯ ದಾಖಲೆ ಮಾಡಿದ್ದಾನೆ. ಈ ಹಿಂದೆಯು ಕೂಡ ಇದೆ ಮಗು 2.6 ವರ್ಷ ವಯಸ್ಸಿನಲ್ಲಿಯೇ "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ಮನ್ನಣೆಯನ್ನು ಪಡೆದಿತ್ತು.